ಕನ್ನಡ

ಶಾಲಾ ಪಠ್ಯಕ್ರಮದ ಸುಧಾರಣೆಗಳು

ಶಾಲಾ ಪಠ್ಯಕ್ರಮದ ಸುಧಾರಣೆಗಳು

ನಮ್ಮ ಶಾಲಾ ಶಿಕ್ಷಣದಲ್ಲಿ ಗಣಿತ, ವಿಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳಂತಹ ವಿಷಯಗಳ ಪ್ರಾಮುಖ್ಯತೆ ನಮಗೆಲ್ಲ ತಿಳಿದಿರುವಂತದ್ದೇ,ಇದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಜೀವನವನ್ನು ಎದುರಿಸಲು ಅಥವಾ ಪ್ರಯೋಜನವನ್ನು ಪಡೆಯುವಂತಾಗಲು ಕೆಲವು ಕಡ್ಡಾಯ ಕಲಿಕೆಗೆ ಶಾಲೆಯು ಜಾಗವನ್ನು ಸೃಷ್ಟಿಸಬೇಕು ಎಂದು ನನ್ನ ಬಯಕೆ. ಅದಕ್ಕಾಗಿ ಈ ಚಿಕ್ಕ ಬರವಣಿಗೆ. ವೈಯಕ್ತಿಕ_ಹಣಕಾಸು ನಮ್ಮ ಜೀವನದ ಒಂದು ಪ್ರಮುಖ ವಿಷಯವೆಂದರೆ ವೈಯಕ್ತಿಕ ಹಣಕಾಸು, ದುಡಿಮೆಯ ಮೂಲಕ ಗಳಿಸಿದ ಆದಾಯವನ್ನು ಹೇಗೆ ನಿರ್ವಹಣೆ ಎಂಬ ಕೌಶಲ್ಯ ಜ್ಞಾನ ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಶಾಲೆಯಲ್ಲಿ ಕಡ್ಡಾಯ ಪಡಿಸಬೇಕಾಗಿದೆ. ಇದು ಮಕ್ಕಳಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸುತ್ತದೆ, ಜವಾಬ್ದಾರಿಯುತ ಖರ್ಚುಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಮುಖ್ಯವಾಗಿ ಅನಗತ್ಯ ಸಾಲಗಳಿಗೆ ಬೀಳದಂತೆ ರಕ್ಷಿಸುತ್ತದೆ. ಇದಲ್ಲದೆ, ಇದು ದೀರ್ಘಾವಧಿಯ ಹಣಕಾಸು ಯೋಜನೆ, ಹೂಡಿಕೆ ತಂತ್ರಗಳ ಕ್ಷೇತ್ರಕ್ಕೆ ಅವರನ್ನು ಪರಿಚಯಿಸುತ್ತದೆ ಮತ್ತು ಅನಿರೀಕ್ಷಿತ ಹಣಕಾಸಿನ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ.